ವಿಶಾವನ್ ಎಂಬುದು ಭಾರತದ ಮಧ್ಯ ಕೇರಳ ಬುಡಕಟ್ಟು ಜನರು ಮಾತನಾಡುವ ದ್ರಾವಿಡ ಭಾಷೆ. ಎರ್ನಾಕುಲಂ ಜಿಲ್ಲೆಯ ಇಡಮಾಲ್ಯಾರ್ ಪ್ರದೇಶದಲ್ಲಿ ಮತ್ತು ತ್ರಿಶೂರ್ ಜಿಲ್ಲೆಯ ವಜಚಲ್ ಪ್ರದೇಶದಲ್ಲಿ ನೆಲೆಸಿರುವ ಕೇರಳದ ಬುಡಕಟ್ಟು ಸಮುದಾಯವೆಂದರೆ ಅದು ವಿಶಾವನ್. ಸರ್ಕಾರಿ ದಾಖಲೆಗಳ ಪ್ರಕಾರ ಅದು ಅಳಿವಿನಂಚಿನಲ್ಲಿದೆಯಾದರೂ ಈ ಬುಡಕಟ್ಟಿನವರು ಇನ್ನೂ ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಡಾ.ಮಿಥುನ್ ಕೆ.ಎಸ್. ರವರ ಟ್ರೈಬ್ಸ್ ಆಫ್ ಇಡಮಲ್ಯರ್ ಎಂಬ ಶೀರ್ಷಿಕೆಯ ಅಧ್ಯಯನವು ಅವರ ಸಾಂಸ್ಕೃತಿಕ ಮತ್ತು ಭಾಷಿಕ ಜನಾಂಗೀಯತೆಯನ್ನು ಸಾಬೀತುಪಡಿಸುತ್ತದೆ. ಈ ಪುಸ್ತಕವು ಸರ್ಕಾರಿ ದಾಖಲೆಗಳಲ್ಲಿ ವಿಶಾವನ್‌ಗಳು ಯಾಕೆ ಪಟ್ಟಿಯಾಗಿಲ್ಲ ಎಂಬುದನ್ನು ಚರ್ಚಿಸುತ್ತದೆ. == ಉಲ್ಲೇಖಗಳು ==